Uttarakhand Helicopter Crash: ಐವರ ಮೃತದೇಹ ಕಂಡು ಕುಟುಂಬದವರ ಆಕ್ರಂದನ | ಹುಟ್ಟೂರಲ್ಲಿ ಇಂದೇ ಅಂತ್ಯಕ್ರಿಯೆ
ಹೆಲಿಕಾಪ್ಟರ್ ದುರಂತದಲ್ಲಿ ಐವರು ಕನ್ನಡಿಗರು ಸಾವನ್ನಪ್ಪಿದ್ದು, ಬೆಂಗಳೂರಿಗೆ ಆಗಮಿಸಿದ ನಾಲ್ವರು ಕನ್ನಡಿಗರ ಮೃತದೇಹ ರಾಜ್ಯಕ್ಕೆ ಆಗಮಿಸಿದೆ. ಡೆಹ್ರಾಡೂನ್ನಿಂದ ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ಗೆ ಮೃತದೇಹಗಳು ಆಗಮಿಸಿದ್ದು, ಆ್ಯಂಬುಲೆನ್ಸ್ಗಳ ಮೂಲಕ ಸ್ವಗ್ರಾಮಗಳಿಗೆ ಶವಗಳನ್ನ ಸ್ಥಳಾಂತರ ಮಾಡಲಾಗ್ತಿದೆ. ಪ್ರತಾಪ್ ಬಾಚಿಹಳ್ಳಿ, ಹೆಚ್.ಎಸ್.ನಟರಾಜ್, ಶಂಕರಗೌಡ, ಕೆ.ಸುಧೀರ್ ಮೃತದೇಹಗಳನ್ನ ಬೆಂಗಳೂರು ಗ್ರಾಮಾಂತರ ಡಿಸಿ ನೇತೃತ್ವದಲ್ಲಿ ಹಸ್ತಾಂತರ ಮಾಡಲಾಯ್ತು. ನಾಲ್ವರ ಹುಟ್ಟೂರುಗಳಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.. ಇನ್ನು ಅರುಣ್ರ ಮೃತದೇಹ ನೇರವಾಗಿ ಬೆಳಗಾವಿಗೇ ರವಾನಿಸಿದ್ದು, ಈಗಾಗಲೇ ಹುಟ್ಟೂರಾದ…
