ಸಾಮಾನ್ಯ ಭಕ್ತರಂತೆ ಬಂದು ದರ್ಶನ ಪಡೆದ ಕೃಷ್ಣಭೈರೇಗೌಡ ಮತ್ತು ಕುಟುಂಬ |Krishna Byre Gowda Visits Hasamba Temple
ಹಾಸನಾಂಬೆ ದೇವಿಯ ದರ್ಶನಕ್ಕೆ ಸಚಿವ ಕೃಷ್ಣಬೈರೇಗೌಡ ಅವರು ಕುಟುಂಬ ಸಮೇತ ಆಗಮಿಸಿ, ₹1,000 ಟಿಕೆಟ್ ಖರೀದಿಸಿ ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ದರ್ಶನ ಪಡೆದಿದ್ದಾರೆ. ಪ್ರೊಟೋಕಾಲ್ ವ್ಯವಸ್ಥೆಯಲ್ಲಿ ಸಮಾನತೆ ಇರಬೇಕು ಎಂಬ ಹಿನ್ನೆಲೆಯಲ್ಲಿ ರೂಪಿಸಿದ್ದ ನಿಯಮದಂತೆ ಸಚಿವರು ನಡೆದುಕೊಂಡಿದ್ದು, ತಾಯಿ ಹಾಗೂ ಪತ್ನಿಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
